ಶತಭಿಷ
	ರಾಶಿಚಕ್ರೀಯ ನಕ್ಷತ್ರಪುಂಜಗಳ ಪೈಕಿ ಒಂದಾದ ಕುಂಭರಾಶಿಗೆ (ಅಕ್ವೇರಿಯಸ್) ಸೇರಿದ ಪ್ರಮುಖ ತಾರೆ (ನಾಡಲ್‍ಸಡ್). ಘಂಟಾವೃತ್ತಾಂಶ 21 ಗಂ. 30ಮಿ. 24ಸೇ. ವಿಷುವದಂಶ 5º 40' 07” ದ. ಕಾಂತಿಮಾನ 2.86; ನಿರಪೇಕ್ಷ ಕಾಂತಿಮಾನ-4.6. ರೋಹಿತದರ್ಶಕೀಯ ಪ್ರರೂಪ ಉ1. ಸೂರ್ಯನಿಂದ 1080 ಜ್ಯೋತಿ ರ್ವರ್ಷಗಳ ದೂರದಲ್ಲಿದೆ. ಈ ನಕ್ಷತ್ರದ ದಕ್ಷಿಣಕ್ಕೆ ಕುಂಭರಾಶಿಯ ಇನ್ನಿತರ ನಕ್ಷತ್ರಗಳು ಇವೆ. 

	ಭಾರತೀಯ ಜ್ಯೋತಿಶ್ಶಾಸ್ತ್ರದ ರೀತ್ಯ ಅಶ್ವಿನ್ಯಾದಿ 27 ನಕ್ಷತ್ರಗಳ ಪೈಕಿ ಇದು 24ನೆಯದು. ಈ ನಕ್ಷತ್ರವನ್ನು ಶತತಾರಾ ಎಂದೂ ಕರೆದಿದೆ. ರಾಕ್ಷಸಗುಣ, ಅಶ್ವಯೋನಿ, ಕಂಠರಜ್ಜು, ಆದಿನಾಡಿಗಳಿಗೆ ಸೇರಿದ ನಕ್ಷತ್ರ ಇದು.			
	  *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ